ನೋಡಿ! ಇಂಟರ್ನೆಟ್ನಲ್ಲಿ ಇಷ್ಟೆಲ್ಲಾ ಬ್ಲಾಗುಗಳು ಎಷ್ಟು ಚೆನ್ನಾಗಿ ನಡೆಯುತ್ತಿವೆ! ನಾನೂ ಕೂಡಾ ಯಾಕೆ ಬರೆಯಬಾರದು? ಬರೆಯಲಿಕ್ಕೆ ಬೇಕಾದ ನೂರೆಂಟು ವಿಷಯಗಳಲ್ಲಿ ಪರಿಣಿತಿ ಇದೆ; ಇಂಟರೆಸ್ಟಿಂಗ್ ಆಗಿ ಬರೆಯುವ talent ಕೂಡಾ ಇದೆ. ಹಾಗಿದ್ದರೆ ಇನ್ನು ಯಾಕೆ ತಡ? ಶುರು ಮಾಡಿಯೇ ಬಿಡೋಣಾ ಎನ್ನುವ ಆರಂಭಶೂರರು ನಮ್ಮಲ್ಲಿ ಬಹಳ.
ಸ್ವಲ್ಪ ಇರೀ ಮಹಾಸ್ವಾಮೀ... ಒಂದು ಚಿಕ್ಕ ವಿಚಾರ... ನಾನು ಕೇಳಿದೆ ಅಂತ ಬೇಸರ ಮಾಡಿಕೋಬೇಡಿ...
ಶುರು ಮಾಡುವದು ದೊಡ್ಡದಲ್ಲ; ಆ ಮೇಲೆ ದಿನಂಪ್ರತಿ ಬಿಡದೇ ಬರೆಯುವ ನಿರ್ಧಾರ ಗಟ್ಟಿಯಾಗಿದೆ ತಾನೆ? ಅರ್ಧದಲ್ಲಿ ಕೈ ಬಿಡುವದಿಲ್ಲ ಅಂತ ಅಂದುಕೊಂಡಿದ್ದೇನೆ...
Wednesday, March 26, 2008
Subscribe to:
Post Comments (Atom)
No comments:
Post a Comment